Wednesday, October 12, 2011

ಯಾರಿಗ್ ಹೇಳಣಾ hosur road ಪ್ರಾಬ್ಲೆಮ್ಮು


ಯಾರಿಗ್ ಹೇಳಣಾ ನಮ್ಮಾ ಪ್ರಾಬ್ಲೆಮ್ಮು
Hosur road traffic ಗೆ ಇಲ್ಲ ಮುಲಾಮು
Elevated expressway ಗೆ ದೊಡ್ಡ ಸಲಾಮು  
ಹೊಗೆ ಕುಡಿತಿದ್ರೆ cancer ಖಾಯಮ್ಮು
ಎಲ್ಲೇ ಇದ್ರೂನು ನೀವ್, ಹೆಂಗೆ ಇದ್ರೂನು
ಬೊಮ್ಮನ ಹಳ್ಳಿಲಾದ್ರು ಹಾಡ್ರಿ ನಮ್ಮ poemmu

|| ಯಾರಿಗ್ ಹೇಳಣಾ ನಮ್ಮಾ ಪ್ರಾಬ್ಲೆಮ್ಮು… Hosur road traffic ಗೆ ಇಲ್ಲ ಮುಲಾಮು ||

ತುಂಬಾ ಸಣ್ಣ ರೋಡು ಅಂತ ಅನ್ಕೊಂಡಿದ್ದೆ ನಾನು… 2000 ಅಲ್ಲಿ
Infosys placement ಆಯ್ತು. Project ಸಿಕ್ತು Electronic city ನಲ್ಲಿ
ಯಾಕೋ ಏನೋ ಯೆಡಿಯೂರಪ್ಪ road ಅಗಿಯೋದ್ ಕಲ್ತ್ ಬಿಟ್ಟವ್ನೆ  
ಹುಡ್ಗೀರ್ ಜೊತೆ bikeನಲ್ ಬಂದ್ರೆ. Police ಮಾಮ ನಿಂತ್ಕೊಂಡ್ ಅವ್ನೆ
ನಾನು ವೈಶಾಲಿ ಗೆ office drop ಮಾಡಕ್ ಆಗ್ಲಿಲ್ಲ
ಆಕೆ ನನ್ ಬಿಟ್ಟು ನನ್ managerನೆ ಕಟ್ಕೊಂಡ್ ಬಿಟ್ಟಳಲ್ಲ

|| ಯಾರಿಗ್ ಹೇಳಣಾ hosur road ಪ್ರಾಬ್ಲೆಮ್ಮು… ವೈಶಾಲಿ ನೀ ಯಾಕೆ ಹತ್ತಿದೆ, 356Mಉ ||

ಶೀಲಾ ಸಿಕ್ಲು silk board ಅಲ್ಲಿ… speed petrol ಹಾಕಿಸಿಕೊಂಡು expressway ಹತ್ತಿದ್ವಿ
Pulsarನಲ್ಲಿ ಇಬ್ರು.. ಒಬ್ರೇ ಕುಂತ ಹಾಗೆ ಕುಂತು ಓಡಾಡ್ಕೊಂಡ್ ಇದ್ವಿ
Wi-Fiನಲ್ಲಿ ಅವಳ ಜೊತೆ chat ಮಾಡಿದ ಕನಸು ಬಿತ್ತು
Midnightalli ಹೊಸ ರೋಡು ನಮ್ಮಿಬ್ರನ್ನ ನೋಡ್ತಾ ಇತ್ತು
Work from home ನೆತ್ತಿಗೆ ಹತ್ತಿ, ನಾನು ಮರೆತೇ office ಮೆಟ್ಲು
ಆದ್ರೆ ಒಂದು ದಿವಸ ಶೀಲಾ ಸೀದಾ ಬಂದು ಮದುವೆ card ಕೊಟ್ಲು

|| ಯಾರಿಗ್ ಹೇಳಣಾ ಎಲ್ಲರದು same problemmu.. Lords Plazaಗೆ ಹೋಗಿ ಬಿಟ್ಕೊಂಡೆ rummu ||

Officeಗೆ ಅಂತಾ ಒಮ್ಮೆ shuttle catch ಮಾಡಕ್ಕೆ ನಾನು stopಗೆ ಹೋದೆ
ನನ್ನ ಪಕ್ಕ ಕುಂತ್ಕೊಂಡೋಳಿಗೆ ತುಟಿ ಪಕ್ಕ ಮಚ್ಚೆ ಇತ್ತು.. ಹೆಸರು ಹೇಳಲಾರೆ
Sudden breaku ಸಾಕು ನಂಗೆ, ಬೀಳೋದಕ್ಕೆ love ನಲ್ಲಿ
ಅಮೇಲ್ ಏನು ಆಯ್ತು ಅಂತ.. ನಿಮಗೆ ನಾನು ಹೇಗೆ ಹೇಳಲಿ
ಅವ್ಳು ನನ್ನ ಹಳೆ project team leader ಆಗಿದ್ಲು ಕಣ್ರೀ
Rating ಕೊಟ್ಟ ಅವಳ ಮುಂದೆ ನಾನು ಬಚ್ಚಾ ಆಗೋದೇ ಕಣ್ರೀ

|| ಯಾರಿಗ್ ಹೇಳಣಾ ನಮ್ಮಾ next ಪ್ರಾಬ್ಲೆಮ್ಮು… ನನ್ನ flashback ಒಂದು chewing gummu ||


ಬ್ಲಾಗ್ ಪೋಸ್ಟ್ ಕೇವಲ ಮನೋರಂಜನೆಗಾಗಿ ಮಾತ್ರ. ಯಾವುದೇ ಘಟನೆ, ವ್ಯಕ್ತಿ ಅಥವ ಅವರ ಕೆಲಸಗಳನ್ನು ಅವಲಂಬಿಸಿರುವುದಿಲ್ಲ. ಹಾಗೇನಾದರೂ ಇದ್ದಲ್ಲಿ ಅದು ಕಾಕತಾಳೀಯವಷ್ಟೇ.
ಚಿತ್ರ ಕೃಪೆ: pawantheactor.com

2 comments: